Quantcast
Channel: World News in Kannada: Latest International World News in Kannada | Vijaya Karnataka
Viewing all articles
Browse latest Browse all 11422

ತೋಟಗಳಿಗೆ ಆನೆಗಳ ದಾಳಿ, ವಿವಿಧ ಬೆಳೆ ಧ್ವಂಸ

$
0
0

ಚನ್ನಪಟ್ಟಣ: ತಾಲೂಕಿನ ಬಿ.ವಿ. ಹಳ್ಳಿ, ಬೈರಶೆಟ್ಟಿಹಳ್ಳಿ, ಮತ್ತು ಶಾನುಭ್ಯೋಗನಹಳ್ಳಿ ಗ್ರಾಮದ ರೈತರ ರಾಗಿ, ಜೋಳ, ಬಾಳೆ, ತೆಂಗಿನ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂ ಮೌಲ್ಯದ ಬೆಳೆ ನಾಶ ಮಾಡಿದೆ.

30 ಮಾವಿನ ಗಿಡ ನಾಶ: ಬಿ.ವಿ.ಹಳ್ಳಿ ಗ್ರಾಮದ ರಾಜುಮಲ್ಲುಂಗೆರೆ ಒಂದು ಎಕರೆ ಬಾಳೆ, ಬೈರಶೆಟ್ಟಿಹಳ್ಳಿ ಗ್ರಾಮದ ಮುದ್ದಯ್ಯ ಒಂದು ಎಕರೆಯಲ್ಲಿದ್ದ 30 ಮಾವಿನ ಗಿಡ ಗಜಪಡೆ ಸಂಪೂರ್ಣ ಬೆಳೆ ನಾಶ ಮಾಡಿದೆ. ಶಾನುಭ್ಯೋಗನಹಳ್ಳಿ ಸೇರಿಂದತೆ ಇಲ್ಲಿನ ಹಲವಾರು ರೈತರ ತೋಟಗಳಿಗೂ ದಾಳಿ ಇಟ್ಟಿರುವ ಅನೆಗಳು ಕಟಾವಿಗೆ ಬಂದಿದ್ದ ಬಾಳೆ ತಿಂದು, ರಾಗಿ, ಭತ್ತ, ಜೋಳ, ತೆಂಗಿನ ಗಿಡಗಳನ್ನಾ ತುಳಿದು ಧ್ವಂಸಗೊಳಿಸಿವೆ.

'ಪದೇ ಪದೆ ನಡೆಯುವ ದಾಳಿಯಿಂದ ಬೆಳೆಗಳನ್ನು ನೆಲಸಮವಾಗತೊಡಗಿವೆ. ನಾವು ಕಂಗಲಾಗಿ ಕೈಕಟ್ಟಿ ಕೂರುವ ಪರಿಸ್ಥಿತಿ ಒದಗಿದೆ. ಎರಡು ತಿಂಗಳಿಂದ ಇದೇ ಗ್ರಾಮಗಳಲ್ಲಿ ಬಾಳೆ, ಜೋಳ, ಟೊಮೋಟ ಬೆಳೆಗಳನ್ನು ನಾಶ ಮಾಡಿ ಲಕ್ಷಾಂತರ ರೂ ನಷ್ಟಮಾಡಿವೆ,'ಎಂದು ರೈತರು ಅಲವತ್ತುಕೊಂಡಿದ್ದಾರೆ.

ಪ್ರತಿನಿತ್ಯದ ಗೋಳು: 'ಎರಡು ವರ್ಷಗಳಿಂದ ಇಲ್ಲಿನ ರೈತರಿಗೆ ಇದು ಪ್ರತಿನಿತ್ಯದ ಗೋಳಾಗಿದೆ. ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಅಟ್ಟುವಲ್ಲಿ ವಿಫಲರಾಗಿದ್ದಾರೆ. ಆದರೆ ಆನೆಗಳ ದಾಳಿ ನಮಗೆ ತಪ್ಪಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಘಟನೆ ನಡೆದಾಗ ಮಾತ್ರ ಪ್ರಚಾರಕ್ಕಾಗಿ ಸಭೆಗಳಲ್ಲಿ ರೈತರಿಗೆ ಪರಿಹಾರ ಮತ್ತು ಭದ್ರತೆಯ ಬಗ್ಗೆ ಮಾತನಾಡುತ್ತಾರೆ. ನಂತರ ಮರೆತು ಮೌನವಹಿಸುತ್ತಾರೆ,'ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ.

ಎಲ್ಲಿಂದ ಬರುತ್ತಿವೆ..?: ಕನಕಪುರ ತಾಲೂಕಿನ ತೆಂಗಿಕಲ್ಲು ಕಬ್ಬಾಳು ಬೆಟ್ಟ, ಮುತ್ತತ್ತಿ, ಬಸವನಬೆಟ್ಟದ ಅರಣ್ಯ ಪ್ರದೇಶದಿಂದ ಬರುವ ಆನೆಗಳ ಹಿಂಡು, ಎರಡು ವರ್ಷಗಳಿಂದ ಬೀಡು ಬಿಟ್ಟಿವೆ. ರಾತ್ರಿ ವೇಳೆ ಜಮೀನಿಗಳಿಗೆ ನುಗ್ಗಿ ದಾಳಿ ಮಾಡುತ್ತವೆ. ಬಿ.ವಿ.ಹಳ್ಳಿ, ವಿರುಪಸಂದ್ರ, ಬೈರಶಟ್ಟಹಳ್ಳಿ, ಹನಿಯೂರು, ವಿರುಪಾಕ್ಷಿಪುರ, ಶಾನುಭ್ಯೋಗನಹಳ್ಳಿ, ಕೋಡಂಬಹಳ್ಳಿ ಗ್ರಾಮದಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಬೆಳೆಗಳ ಮೇಲೆ ಆನೆಗಳು ದಾಳಿ ನಡೆಸುತ್ತಲೇ ಇವೆ.

ರೈತರ ಜೀವ ಭಯ: 'ಆನೆ ದಾಳಿಯಿಂದ ಗ್ರಾಮಸ್ಥರು ಜೀವ ಭಯದಿಂದ ಬದುಕುತ್ತಿದ್ದಾರೆ. ರಾತ್ರಿ ವೇಳೆ ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದಿಂದ ಗ್ರಾಮಗಳಿಗೆ ಹೋಗಬೇಕಾದರೆ ರಸ್ತೆ ಮಧ್ಯೆ ಆನೆಗಳ ಬರುತ್ತವೆ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದು ಮನೆ ಸೇರಬೇಕಾಗಿದೆ. ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಆನೆಗಳನ್ನ ಓಡಿಸಲು ಪಟಾಕಿ ಸಿಡಿಸಿ ಪ್ರಯತ್ನ ಪಡುತ್ತಿದ್ದಾರೆಯೇ ಹೊರತು ಬೇರೆಡೆಗಟ್ಟಲು ಪ್ರಯತ್ನ ಪಡುತ್ತಿಲ್ಲ. ಆನೆಗಳು ಮಾತ್ರ ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ರೈತರ ಬೆಳೆಗಳನ್ನು ನಾಶಮಾಡುತ್ತಿವೆ.ಇನ್ನಾದರೂ ಆನೆಗಳು ಬಾರದಂತೆ ಸೋಲಾರ್‌ ಫೆನ್ಸಿಂಗ್‌ ಹಾಕಬೇಕು,' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಧಿಕಾರಿ ಭೇಟಿ: ಆನೆಗಳ ದಾಳಿ ನಡೆಸಿದ ಗ್ರಾಮಗಳಿಗೆ ಭೇಟಿ ನೀಡಿದ ಅದಿಕಾರಿಗಳು, 'ದಾಳಿಯಿಂದ ರೈತ ತೋಟಗಳ ಬೆಳ ನಾಶವಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆಯಿಂದ ಸಿಗುವ ಪರಿಹಾರದ ಹಣವನ್ನು ನಷ್ಟಕ್ಕೊಳಾಗಿರುವ ರೈತರಿಗೆ ಕೊಡಿಸಿಕೊಡಲಾಗುವುದು,'ಎಂದು ಭರವಸೆ ನೀಡಿದ್ದಾರೆ.

'ಗುತ್ತಿಗೆ ಪಡೆದು ಬೇಸಾಯ ಮಾಡಿದ್ದ ಬಾಳೆ ತೋಟಕ್ಕೆ ನುಗ್ಗಿದ ಗಜಪಡೆ ಒಂದು ಎಕರೆಯಲ್ಲಿ ಬಾಳೆ ಬೆಳೆ ತಿಂದು ಹಾಳು ಮಾಡಿವೆ. ಸಾಲ ಮಾಡಿ ಎರಡು ಲಕ್ಷ ಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು, ವರ್ಷ ಪೂರ್ತಿ ದುಡಿದು ಬೆಳದ ಬೆಳೆ ಕೈಗೆ ಬಂದ ತುತ್ತು ಕೈಗೆ ಬಾರದಂತಾಗಿದೆ, 'ಎಂದು ರೈತ ರಾಜುಮಲ್ಲುಂಗೆರೆ ತನ್ನ ನೋವು ತೋಡಿಕೊಂಡಿದ್ದಾರೆ.

ವಿಷ ಕುಡಿಯಬೇಕಾದ ಪರಿಸ್ಥಿತಿ..!: ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಬೆಳೆದು ಬೆಳೆ ಕೈಬರುವಾಗ ದಾಳಿ ಮಾಡಿ ತಿಂದು ಹಾಕುತ್ತಿವೆ. ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು ಅವುಗಳ ದಾಳಿ ತಡೆಗಟ್ಟದಿದ್ದಲ್ಲಿ ರೈತರು ವಿಷ ಕುಡಿಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಈಗಿನ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂಬುದು ರೈತರಆಗ್ರಹ.

ಆನೆದಾಳಿಯಿಂದ ಲಕ್ಷಾಂತರ ಮೌಲ್ಯದ ರೈತರ ಬೆಳೆ ನಾಶವಾದರೆ ಸರಕಾರ ಕೇವಲ ಸಾವಿರ ರೂ. ಮಾತ್ರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ಆನೆಗಳು ಒಂದೇ ದಿನದಲ್ಲಿ ನಾಶ ಮಾಡುತ್ತಿರುವುದರಿಂದ ರೈತರು ಕಂಗಲಾಗಿದ್ದಾರೆ. ಇದುವರಗೆ ಸಂಬಂಧಪಟ್ಟ ಇಲಾಖೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ. ಬೀಡು ಬಿಟ್ಟಿರುವ ಅನೆಗಳನ್ನು ಶೀಘ್ರವಾಗಿ ಓಡಿಸಲು ಕ್ರಮ ತಗೆದುಕೊಳ್ಳಬೇಕಿದೆ ಜತೆಗೆ ಕಾಡುಪ್ರಾಣಿಗಳ ದಾಳಿಗೆ ಮುಕ್ತಿ ನೀಡಬೇಕಿದೆ. ಶಾಸಕ ಸಿ.ಪಿ. ಯೋಗೀಶ್ವರ್‌ ಕೂಡಲೇ ಅರಣ್ಯಾಧಿಕಾರಿಗಳ ಸಭೆ ನಡೆಸಿ ಪರಿಹಾರ ಒದಗಿಸುವುದರ ಜತೆಗೆ ಆನೆಗಳನ್ನು ಬೇರೆಡೆಗೆ ಅಟ್ಟುವಂತೆ ತಿಳಿಸಬೇಕು

ರವಿ, ರೈತ ಮುಖಂಡ, ಶಾನುಬ್ಯೋಗನಹಳ್ಳಿ



Viewing all articles
Browse latest Browse all 11422

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>