Quantcast
Channel: World News in Kannada: Latest International World News in Kannada | Vijaya Karnataka
Viewing all articles
Browse latest Browse all 11422

ಪಿಡಿಒ, ಎಂಜಿನಿಯರ್‌ಗಳಿಂದ ಹಣ ವಸೂಲಿಗೆ ಆದೇಶ

$
0
0

ಸಾತನೂರು: ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಹೊನ್ನಿಗಾನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿಯೋಜನೆಯಡಿ ನಿಯಮ ಮೀರಿ ಕಾಮಗಾರಿ ನಡೆಸಿರುವ ಆರೋಪದ ಮೇರೆಗೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಶಿವಸ್ವಾಮಿ, ಪಿಡಿಒ ಶಿವರಾಜಯ್ಯ, ತಾಂತ್ರಿಕ ಅಧಿಕಾರಿಗಳಿಂದ ಸರಕಾರಕ್ಕೆ ಆಗಿರುವ ನಷ್ಟವನ್ನು ಹಿಂತಿರುಗಿಸುವಂತೆ ಜಿಲ್ಲಾ ಒಂಬುಡ್ಸ್‌ಮನ್‌ ವಿಷಕಂಠ ಲಿಖಿತ ಆದೇಶ ಹೊರಡಿಸಿದ್ದಾರೆ.

ಆರ್‌ಟಿಯ ಕಾರ್ಯಕರ್ತ ರವಿಕುಮಾರ್‌, ಹೊನ್ನಿಗಾನಹಳ್ಳಿಯ ಮುಖಂಡ ವಿಶ್ವನಾಥ್‌ ಅವರು ನರೇಗಾದಲ್ಲಿ ನಡೆಸಲಾಗಿರುವ ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿಯ ಒಂಬುಡ್ಸ್‌ಮನ್‌ ವಿಷಕಂಠ ಅವರು ದೂರುದಾರರ ಅರ್ಜಿಯ ತನಿಖೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.

ಕಾಮಗಾರಿ ಬಗ್ಗೆ ದೂರು: ಹೊನ್ನಿಗಾನಹಳ್ಳಿ ಗ್ರಾ.ಪಂನಲ್ಲಿ ಅಧ್ಯಕ್ಷೆ ಭಾಗ್ಯಲಕ್ಷ್ಮಿಶಿವಸ್ವಾಮಿ ಅವರ ಆಡಳಿತಾವಧಿಯಲ್ಲಿ, ಅಭಿವೃದ್ಧಿ ಅಧಿಕಾರಿ ಶಿವರಾಜಯ್ಯ, ತಾಂತ್ರಿಕ ಅಧಿಕಾರಿ ನೇತೃತ್ವದಲ್ಲಿ ನಡೆಸಲಾಗಿರುವ ಕಾಡಹಳ್ಳಿ ರಸ್ತೆಯಲ್ಲಿ ಕಾಮಗಾರಿ ನಡೆಸದೇ ಹಣ ದುರುಪಯೋಗ, ದಾಸನಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ದುರುಪಯೋಗ, ಮುತ್ತುರಾಯನ ದೇವಸ್ಥಾನ ಬಳಿಯ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ದುರುಪಯೋಗ ಚೆಕ್‌ಡ್ಯಾಂ ಕಾಮಗರಿಯಲ್ಲಿ ಕಳಪೆ ಸೇರಿದಂತೆ ಇನ್ನಿತರೆ ಕಾಮಗಾರಿಗಳ ಬಗ್ಗೆ ದೂರು ನೀಡಿದ್ದರು.

ದಾಖಲೆ ಹಾಜರಿಗೆ ಆದೇಶ: ಇವರ ದೂರಿನನ್ವಯ ತನಿಖೆ ಆರಂಭಿಸಿದ ಜಿಲ್ಲಾ ಒಂಬುಡ್ಸ್‌ಮನ್‌ ನೇತೃತ್ವದ ಅಧಿಕಾರಿಗಳ ತಂಡ ತಾಲೂಕು ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆಗಳನ್ನು ಹಾಜರುಪಡಿಸುವಂತೆ ನೊಟೀಸ್‌ ನೀಡಿ ದೂರುದಾರರ ಸಮ್ಮುಖದಲ್ಲಿ ತನಿಖೆ ನಡೆಸಿದ ಅಧಿಕಾರಿಗಳು, ದಾಸನಕಟ್ಟೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ 29882 ರೂ, ಮುತ್ತುರಾಯನ ದೇವಸ್ಥಾನದ ಬಳಿಯ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 29700, ಕಾಡಹಳ್ಳಿ ರಸ್ತೆ ಕಾಮಗಾರಿಯಲ್ಲಿ 8612 ರೂ, ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೃಡಪಡಿಸಿ ಇದರಿಂದ ಸರಕಾರಕೆಕ ಆಗಿರುವ ನಷ್ಟವನ್ನು ಅಧ್ಯಕ್ಷೆ, ಅಭಿವೃದ್ದಿ ಅಧಿಕಾರಿ, ಹಾಗು ತಾಂತ್ರಿಕ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಆದೇಶಿಸಲಾಗಿದೆ.

ಕಳಪೆ ಸಾಧನೆ: ಕನಕಪುರ ತಾಲೂಕಿನ ಇತರೆ ಗ್ರಾಮಪಂಚಾಯಿತಿಗಳಿಗೆ ಹೋಲಿಸಿದಲ್ಲಿ ನರೇಗಾವನ್ನು ಬಳಸಿಕೊಳ್ಳುವಲ್ಲಿ ಮತ್ತು ಇನ್ನಿತರೆ ಅಭಿವೃದ್ಧಿ ಕಾರ್ಯದಲ್ಲಿ ಕಳಪೆ ಸಾಧನೆ ಮಾಡಿರುವ ಗ್ರಾ.ಪಂಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಗ್ರಾ.ಪಂನಲ್ಲಿ ನಡೆಸಿರುವ ಕಾಮಗಾರಿಗಳಲ್ಲೂ ಅಕ್ರಮ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಜನರ ತಿಸ್ಕಾರಕ್ಕೆ ಒಳಗಾಗಿದೆ. ಜನಸಾಮಾನ್ಯರು ಕಾಮಗಾರಿ ಹಾಗೂ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಯಾರದ್ದೋ ಕಪಿಮುಷ್ಟಿಯಲ್ಲಿ ಇಲ್ಲಿನ ಆಡಳಿತ ನಡೆಯುತ್ತಿದೆ ಅದಕ್ಕೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಅವರು ಹೇಳಿದಂತೆ ಇಲ್ಲಿ ಎಲ್ಲವೂ ನಡೆಯುತ್ತಿದೆ. ಸರಕಾರದ ಸವಲತ್ತು ಅರ್ಹರಿಗೆ ದೊರಕುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ.


Viewing all articles
Browse latest Browse all 11422

Trending Articles


Final chapter from Krishnamacharya's Yogasanagalu Part II Pranayam. Plus the...


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


How Pattabhi Jois learned Yoga from Krishnamacharya ( from Interviews )


ಶಾಕಿಂಗ್: ಸೆಕ್ಸ್ ವೇಳೆಯೇ ಉಸಿರುಗಟ್ಟಿ ಸಾವನ್ನಪ್ಪಿದ್ಲು ಯುವತಿ


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


Aadu Aata Aadu Kannada Songs Download


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ



<script src="https://jsc.adskeeper.com/r/s/rssing.com.1596347.js" async> </script>