Quantcast
Channel: World News in Kannada: Latest International World News in Kannada | Vijaya Karnataka
Viewing all articles
Browse latest Browse all 11422

ವಿಕ ಸಾಮಾಜಿಕ ಕಳಕಳಿ; ವಿದ್ಯಾರ್ಥಿಗಳಿಗೆ ಪ್ರಯೋಜನ

$
0
0

ರಾಮನಗರ: ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಿ ಪಠ್ಯ ಸಿದ್ಧಪಡಿಸುವ ದೊಡ್ಡ ಹೊಣೆಗಾರಿಕೆಯಿಂದ ನಮ್ಮ ಶಿಕ್ಷ ಕರ ವೃತ್ತಿ ಕೌಶಲ್ಯಕ್ಕೆ ಹೊಸ ಹುರುಪು ಮತ್ತು ಅಸ್ಮಿತೆ ಸಿಕ್ಕಂತಾಗಿದೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ ಹೇಳಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯದ ಪ್ರವಾಸಿ ಮಂದಿರದಲ್ಲಿ ನಡೆದ ವಿಜಯ ಕರ್ನಾಟಕ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಿ ಪಠ್ಯ ನೀಡುತ್ತಿರುವ ಶಿಕ್ಷ ಕರನ್ನು ಅಭಿನಂದಿಸಿ ಮಾತನಾಡಿದರು.

ಇಂದು ತರಗತಿ ಕೇಂದ್ರಿತ ಮತ್ತು ಶಿಕ್ಷ ಕ ಕೇಂದ್ರಿತ ತರಗತಿಗಳಿಗಿಂತ ಭಿನ್ನವಾಗಿ ಯೋಚಿಸುತ್ತಿರುವ ವಿದ್ಯಾರ್ಥಿಗಳು ತಮ್ಮನ್ನು ಸ್ಪರ್ಧಾತ್ಮಕವಾಗಿ ಗಟ್ಟಿಗೊಳಿಸುವ ಆಕರಗಳ ಹುಡುಕಾಟದಲ್ಲಿದ್ದಾರೆ. ಶಿಕ್ಷ ಕರ ತರಗತಿ ಬೋಧನೆ ಮತ್ತು ಲಭ್ಯ ಪಠ್ಯಪುಸ್ತಕಗಳ ಜತೆಗೆ ಮಾರ್ಗದರ್ಶಿ ಪಠ್ಯಗಳು ಕೂಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು ಬೌದ್ಧಿಕವಾಗಿ ಬಲಿಷ್ಠಗೊಳಿಸುತ್ತಿವೆ ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷ ಣಿಕ ಅಭಿವೃದ್ಧಿಯಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ವಹಿಸಿರುವ ಸಾಮಾಜಿಕ ಕಾಳಜಿಯಿಂದಾಗಿ ಸಾವಿರಾರು ಸಂಖ್ಯೆಯ ಬಡವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ. ಸ್ಪರ್ಧಾತ್ಮಕ ಕಲಿಕೆಯ ವಾತಾವರಣದಲ್ಲಿ ವಿಕದ ಭಾಗವಹಿಸುವಿಕೆ ಅಭಿನಂದನೀಯ ಎಂದರು.

2017ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಗಳಿಸುವಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ ಶಿಕ್ಷ ಕರ ಶ್ರಮ ವಿದ್ಯಾರ್ಥಿಗಳ ಪರಿಶ್ರಮದೊಂದಿಗೆ ವಿಜಯಕರ್ನಾಟಕ ನಡೆಸಿದ ವಿದ್ಯಾರ್ಥಿ ವಿಜಯ ಕಾರ್ಯಾಗಾರ ಮತ್ತು ಪ್ರಶ್ನೋತ್ರರಗಳ ಪ್ರಕಟಣೆ ಕೂಡ ಸಹಾಯ ಮಾಡಿವೆ ಎಂದು ಅವರು ಹೇಳಿದರು.

ಸರಳ ಸಮಾರಂಭದಲ್ಲಿ ಹಾರೋಕೊಪ್ಪ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಜಾಕೀರ್‌ ಹುಸೇನ್‌, ಹರಳಾಳುಸಂದ್ರ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ವಿನಯ್‌ಕುಮಾರ್‌, ಚನ್ನಪಟ್ಟಣ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್‌ ಶಿಕ್ಷಕ ವಸಂತ್‌ಕುಮಾರ್‌, ಬಾಲಕಿಯರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷ ಕ ವೇಣುಗೋಪಾಲ್‌ ಅವರು ಗೌರವ ಸನ್ಮಾನ ಸ್ವೀಕರಿಸಿದರು. ಚನ್ನಪಟ್ಟಣ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿಜ್ಞಾನ ಶಿಕ್ಷ ಕ ಸ್ವಾಮಿ ಹಾಗೂ ವಿಜಯ ಕರ್ನಾಟಕ ಬೆಂಗಳೂರು ಬ್ಯೂರೋ ವಿಭಾಗದ ಮುಖ್ಯಸ್ಥ ಕೆ. ಕರಿಸ್ವಾಮಿ ಹಾಗೂ ಇನ್ನಿತರೆ ಸಿಬ್ಬಂದಿ ಹಾಜರಿದ್ದರು.


Viewing all articles
Browse latest Browse all 11422

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಅತ್ತಿಗೆ–ಮೈದುನ ಅಕ್ರಮ ಸಂಬಂಧ, ಆಮೇಲೇನಾಯ್ತು ಗೊತ್ತಾ…?



<script src="https://jsc.adskeeper.com/r/s/rssing.com.1596347.js" async> </script>