Quantcast
Channel: World News in Kannada: Latest International World News in Kannada | Vijaya Karnataka

Pro Khalistan: ಆಸ್ಟ್ರೇಲಿಯಾ ಬಳಿಕ ಕೆನಡಾದಲ್ಲಿಯೂ ಕೃತ್ಯ: ಹಿಂದೂ ದೇಗುಲದ ಮೇಲೆ ಖಲಿಸ್ತಾನಿಗಳ ದಾಳಿ

0
0
Pro Khalistan Attack on Indians: ಕೆನಡಾದ ಬ್ರಾಂಪ್ಟನ್‌ನಲ್ಲಿ ಹಿಂದೂ ದೇವಸ್ಥಾನದಲ್ಲಿ ಖಲಿಸ್ತಾನ ಪರ ಸಂಘಟನೆಯ ದುಷ್ಕರ್ಮಿಗಳು ಭಾರತ ವಿರೋಧಿ ಬರಹ ಗೀಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಖಲಿಸ್ತಾನಿ ಗುಂಪುಗಳಿಂದ ದಾಳಿಗಳು ನಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ.

Man Sues Woman: 'ಫ್ರೆಂಡ್ಸ್ ಆಗಿ ಇರೋಣ' ಎಂದ ಗೆಳತಿಗೆ ಮೇಲೆ 24 ಕೋಟಿ ರೂ ದಾವೆ ಹೂಡಿದ ಭಗ್ನಪ್ರೇಮಿ!

0
0
Singapore Man Sues Woman: ಪ್ರೀತಿ ಮಾಡುತ್ತಿಲ್ಲ, ನಿನ್ನನ್ನು ಸ್ನೇಹಿತನನ್ನಾಗಿ ನೋಡಿರುವುದಷ್ಟೇ ಎಂದು ಹೇಳಿದ್ದ ಮಹಿಳೆ ಮೇಲೆ ಸಿಂಗಪುರದ ವ್ಯಕ್ತಿಯೊಬ್ಬ 3 ಮಿಲಿಯನ್ ಡಾಲರ್ ಮೊತ್ತದ ದಾವೆ ಹೂಡಿದ್ದಾನೆ. ತನ್ನ ಪ್ರೀತಿಯನ್ನು ಆಕೆ ತಿರಸ್ಕರಿಸಿರುವುದರಿಂದ ಮನಸಿಗೆ ಘಾಸಿಯಾಗಿದೆ ಎಂದು ಆತ ಆರೋಪಿಸಿದ್ದಾನೆ.

Pakistan Economic Crisis: IMF ಮುಂದೆ ಮಂಡಿಯೂರಿದ ಪಾಕಿಸ್ತಾನ; ಕಲ್ಪನೆಗೂ ಮೀರಿದ ಷರತ್ತು ಒಪ್ಪಲೇಬೇಕಾಗಿದೆ ಎಂದ ಪಾಕ್‌ ಪ್ರಧಾನಿ

0
0
Shehbaz Sharif on Pakistan Economic Crisis and IMF: ಪಾಕಿಸ್ತಾನದಲ್ಲಿ ಒಂದು ತುತ್ತಿನ ಅನ್ನಕ್ಕೂ ಅಲ್ಲಿನ ನಾಗರೀಕರು ಪರದಾಡುತ್ತಿದ್ದಾರೆ. ಅಷ್ಟೊಂದು ಆರ್ಥಿಕ ಪರಿಸ್ಥಿತಿ ಪಾಕ್‌ನಲ್ಲಿ ಹದಗೆಟ್ಟಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ನೆರವಿಗಾಗಿ ಕಾಯುತ್ತಿದೆ. ಆದರೆ, ಆರ್ಥಿಕ ನೆರವು ನೀಡಲು ಐಎಂಎಫ್‌ ಹಲವು ಷರತ್ತುಗಳನ್ನು ವಿಧಿಸಿದ್ದು, ಪಾಕ್‌ ಮಂಡಿಯೂರುವಂತೆ ಮಾಡಿದೆ. ಈಗಾಗಲೇ ಪಾಕ್‌ ಪ್ರಧಾನಿ ಕಲ್ಪನೆಗೂ ಮೀರಿದ ಷರತ್ತುಗಳನ್ನು ಐಎಂಎಫ್‌ ವಿಧಿಸಿದೆ ಅವುಗಳನ್ನು ಒಪ್ಪಲೇಬೇಕಾಗಿದೆ ಎಂದು ಹೇಳಿದ್ದಾರೆ.

Airport Check-In: ಏರ್‌ಪೋರ್ಟ್‌ನಲ್ಲಿ ಮಗು ಬಿಟ್ಟು ವಿಮಾನ ಏರಲು ಓಡಿದ ದಂಪತಿ

0
0
Airport Check-In: ಇಸ್ರೇಲ್‌ನಿಂದ ಬ್ರಸೇಲ್ಸ್‌ಗೆ ಹೊರಟಿದ್ದ ದಂಪತಿ, ವಿಮಾನ ನಿಲ್ದಾಣದ ಚೆಕ್ ಇನ್ ವಿಭಾಗದಲ್ಲಿಯೇ ಮಗುವನ್ನು ಬಿಟ್ಟು ವಿಮಾನ ಹತ್ತಲು ಓಡಿದ ಘಟನೆ ನಡೆದಿದೆ. ಮಗುವಿಗೆ ಟಿಕೆಟ್ ತೆಗೆದುಕೊಳ್ಳದ ಕಾರಣ ಅವರು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು.

Super Cows: ಸಾವಿರಾರು ಲೀಟರ್ ಹಾಲು ಕೊಡುವ 3 ಹಸುಗಳನ್ನು ಸೃಷ್ಟಿಸಿದ ಚೀನಾ

0
0
China Super Cows: ಜೀವಿತಾವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಲೀಟರ್ ಹಾಲು ನೀಡಬಲ್ಲ ಭಾರಿ ಸಾಮರ್ಥ್ಯದ ಮೂರು ಹಸುಗಳನ್ನು ಸೃಷ್ಟಿಸಿರುವುದಾಗಿ ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಸುಗಳು ದೇಶದ ಹಾಲಿನ ಕೊರತೆಯನ್ನು ನೀಗಿಸಲಿವೆ ಎಂದು ಹೇಳಿದ್ದಾರೆ.

China Balloon: ಅಮೆರಿಕದೊಳಗೆ ನುಗ್ಗಿದ ಚೀನಾ 'ಬಲೂನು': ಇದು ಆಕಸ್ಮಿಕ ಎಂದ ಬೀಜಿಂಗ್

0
0
China Airship Enters US Airspace: ಚೀನಾಕ್ಕೆ ಸೇರಿದ ಬಲೂನು ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದು ಗೂಢಚಾರಿಕೆಯ ಬಲೂನು ಎಂದು ಅಮೆರಿಕ ಆರೋಪಿಸಿತ್ತು. ಆದರೆ ಚೀನಾ ಅದು ಆಕಸ್ಮಿಕವಾಗಿ ಬಂದ ವಾಯು ನೌಕೆ ಎಂದು ಹೇಳಿದೆ.

Arctic Blast: ಯುಗದ ಚಳಿಗೆ ತತ್ತರಿಸಿದ ಅಮೆರಿಕ; ಮೈನಸ್‌ 46 ಸೆಲ್ಸಿಯಸ್‌ಗೆ ಕುಸಿದ ತಾಪಮಾನ!

0
0
Arctic Blast Hits Us: ಯುಗದ ಚಳಿಗೆ ಅಮೆರಿಕ ತತ್ತರಿಸಿದ್ದು, ಈಶಾನ್ಯ ಅಮೆರಿಕದಲ್ಲಿ ತಾಪಮಾನ ಮೈನಸ್‌ 46 ಸೆಲ್ಸಿಯಸ್‌ಗೆ ಕುಸಿದಿದೆ. ಆರ್ಕ್ಟಿಕ್‌ ಸ್ಫೋಟ ಉಂಟಾಗಿರುವುದರಿಂದ ಅತ್ಯಂತ ಅಪಾಯಕಾರಿ ಶೀತ ಮಾರುತ ಈಶಾನ್ಯ ಅಮೆರಿಕ ಹಾಗೂ ಕೆನಡಾಕ್ಕೆ ಅಪ್ಪಳಿಸಿದೆ. ಈ ಹಿನ್ನೆಲೆ ಇಲ್ಲಿನ ತಾಪಮಾನ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ. ಮರಗುಟ್ಟುವ ಚಳಿಗೆ ಅಮೆರಿಕ ಜನರು ತತ್ತರಿಸಿದ್ದಾರೆ. ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿ ತಾಪಮಾನವು ಮೈನಸ್‌ 79 ಡಿಗ್ರಿ ಸೆಲ್ಸಿಯಸ್‌ ತಲುಪುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Saad Rizvi: ಅಣು ಬಾಂಬ್ ಹಿಡಿದು ದೇಶಗಳನ್ನು ಬೆದರಿಸಿ ಹಣ ವಸೂಲಿ ಮಾಡಿ: ಪಾಕ್‌ಗೆ ಇಸ್ಲಾಮಿಸ್ಟ್ ಮುಖಂಡನ ಸಲಹೆ

0
0
Islamist Leader Saad Rizvi: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನವು ಹಣಕ್ಕಾಗಿ ಬೇರೆ ದೇಶಗಳ ಮುಂದೆ ಬೇಡಬಾರದು. ಬದಲಾಗಿ ಕೈಯಲ್ಲಿ ಆಟಂ ಬಾಂಬ್ ಹಿಡಿದುಕೊಂಡು ಹೋಗಿ ಬೆದರಿಸಿ ಹಣ ವಸೂಲಿ ಮಾಡಬೇಕು ಎಂದು ವಿವಾದಿತ ಇಸ್ಲಾಮಿಸ್ಟ್ ಮುಖಂಡ ಸಾದ್ ರಿಜ್ವಿ ಸಲಹೆ ನೀಡಿದ್ದಾನೆ.

Pizza Chef Arrested: ಫ್ರಾನ್ಸ್‌ನಲ್ಲಿ ಪಿಜ್ಜಾ ಬಾಣಸಿಗನಾಗಿದ್ದ ಇಟಲಿಯ ಮಾಫಿಯಾ ಕಿಲ್ಲರ್: 16 ವರ್ಷದ ಬಳಿಕ ಬಂಧನ

0
0
Italian Mafia Killer Arrested in France: ಇಟಲಿಯಲ್ಲಿ ಮಾಫಿಯಾ ಹಂತಕನಾಗಿ ಹಲವು ಕೊಲೆ ಪ್ರಕರಣಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕ್ರಿಮಿನಲ್, ಫ್ರಾನ್ಸ್‌ಗೆ ಪರಾರಿಯಾಗಿ ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಪಿಜ್ಜಾ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

Spanish Court: ಬೀದಿಯಲ್ಲಿ ಬೆತ್ತಲಾಗಿ ಓಡಾಡುವುದು ಹಕ್ಕು: ವ್ಯಕ್ತಿಯ ವಾದವನ್ನು ಎತ್ತಿಹಿಡಿದ ಕೋರ್ಟ್

0
0
Spanish Court on Nudity: ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ವ್ಯಕ್ತಿಗೆ ಅಧೀನ ನ್ಯಾಯಾಲಯವೊಂದು ವಿಧಿಸಿದ್ದ ದಂಡವನ್ನು ಸ್ಪೇನ್‌ನ ಹೈಕೋರ್ಟ್ ಒಂದು ರದ್ದುಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ಓಡಾಡುವುದು ಅದು ಆತನ ಹಕ್ಕು ಎಂದು ಹೇಳಿದೆ.

Chinese Balloon: ಚೀನಾದ 'ಗೂಢಚಾರ' ಬಲೂನನ್ನು ಹೊಡೆದುರುಳಿಸಿದ ಅಮೆರಿಕ

0
0
China Airship Enters US Airspace: ಚೀನಾಕ್ಕೆ ಸೇರಿದ ಬಲೂನು ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದು ಗೂಢಚಾರಿಕೆಯ ವಸ್ತು ಎಂದು ಅಮೆರಿಕ ಶಂಕಿಸಿತ್ತು. ಅದನ್ನು ಕ್ಷಿಪಣಿ ಬಳಸಿ ಅಮೆರಿಕ ಪಡೆಗಳು ಸಮುದ್ರದ ಮೇಲೆ ಉರುಳಿಸಿವೆ. ಇದು ನಿರಪಾಯಕಾರಿ ನಾಗರಿಕ ವಾಯು ನೌಕೆ ಎಂದು ಚೀನಾ ಪ್ರತಿಪಾದಿಸಿತ್ತು.

Pakistan Blocks Wikipedia: ಪಾಕಿಸ್ತಾನದಲ್ಲಿ ಆನ್‌ಲೈನ್‌ ವಿಶ್ವಕೋಶ 'ವಿಕಿಪೀಡಿಯಾ'ಗೆ ನಿರ್ಬಂಧ

0
0
Pakistan Blocks Wikipedia: ಧರ್ಮನಿಂದನೆಯ ಆಕ್ಷೇಪಾರ್ಹ ಅಂಶಗಳನ್ನು ಹೊಂದಿರುವ ಕಾರಣಕ್ಕೆ ವಿಕಿಪೀಡಿಯಾ ಮೇಲೆ ಪಾಕಿಸ್ತಾನ ನಿಷೇಧ ಹೇರಿದೆ. ಧರ್ಮನಿಂದನೆಗೆ ಸಂಬಂಧಿಸಿದ ಮಾಹಿತಿಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ವಿಕಿಪೀಡಿಯಾಕ್ಕೆ ಪಾಕಿಸ್ತಾನ ಎಚ್ಚರಿಕೆ ನೀಡಿತ್ತು.

Pervez Musharraf Passes Away: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

0
0
Pervez Musharraf Passes Away: ಸುದೀರ್ಘ ಕಾಲದಿಂದ ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದುಬೈನಲ್ಲಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದ ಮುಷರಫ್ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು.

Pervez Musharraf: ಪರ್ವೇಜ್ ಮುಷರಫ್ ಅಂದು ಪ್ರಧಾನಿ ಮೋದಿಯನ್ನು ತೆಗಳಿ ರಾಹುಲ್‌ ಗಾಂಧಿಯನ್ನು ಹೊಗಳಿದ್ದೇಕೆ?

0
0
Pervez Musharraf Passes Away: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಿಲಿಟರಿ ದಂಡ ನಾಯಕ ಹಾಗೂ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಮುಷರಫ್ ಅವರ ಹಳೆಯ ಸಂದರ್ಶನದ ತುಣುಕೊಂದು ಹರಿದಾಡಲು ಆರಂಭಿಸಿತು. ಪರ್ವೇಜ್ ಮುಷರಫ್ 2019ರಲ್ಲಿ ಪ್ರಧಾನಿ ಮೋದಿ ಅವರನ್ನು ತೆಗಳಿ ರಾಹುಲ್ ಗಾಂಧಿ ಅವರನ್ನು ಹೊಗಳಿದ್ದ ವಿಡಿಯೋ ಅದು. ಅಂದಿನ ಆ ವಿಡಿಯೋ ಇದೀಗ ಮುಷರಫ್ ನಿಧನದ ಬೆನ್ನಲ್ಲೇ ಭಾರೀ ಸದ್ದು ಮಾಡ್ತಿದೆ!

Chile wildfires: ಚಿಲಿಯನ್ನು ಸುಡುತ್ತಿದೆ ಕಾಳ್ಗಿಚ್ಚು, ವ್ಯಾಪಿಸಿದ ಜ್ವಾಲೆಗೆ 23 ಮಂದಿ ಬಲಿ

0
0
Wildfires blazing through Chile: ದಕ್ಷಿಣ ಅಮೆರಿಕದ ಚಿಲಿ ರಾಷ್ಟ್ರದಲ್ಲಿ ಬೇಸಿಗೆಯ ಬಿಸಿ ಗಾಳಿಯ ಜೊತೆಗೆ ಕಾಳ್ಗಿಚ್ಚು ವ್ಯಾಪಿಸಿದೆ. ಇದರಿಂದಾಗಿ ಸಾವಿರಾರು ಎಕರೆ ಅರಣ್ಯ ಹಾಗೂ ವಸತಿ ಪ್ರದೇಶಗಳು ಬೆಂಕಿಗೆ ಆಹುತಿಯಾಗಿದೆ ಹಾಗೂ ಹತ್ತಾರು ಜನರು ಬೆಂಕಿಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಸತತ ಪ್ರಯತ್ನ ಮುಂದುವರಿಸಿದ್ದಾರೆ. ವೇಗವಾಗಿ ಬೀಸುವ ಗಾಳಿಯಿಂದಾಗಿ ಬೇರೆ ಬೇರೆ ಪ್ರದೇಶಗಳಿಗೆ ಕಾಳ್ಗಿಚ್ಚು ಹರಡುತ್ತಿದೆ.

Turkey Earthquake: ಟರ್ಕಿಯಲ್ಲಿ ಪ್ರಬಲ ಭೂಕಂಪ- ಹಲವು ಕಟ್ಟಡಗಳು ಧರೆಗೆ

0
0
Turkey Earthquake: ಭೂಕಂಪಗಳಿಗೆ ಸೂಕ್ಷ್ಮಪ್ರದೇಶವಾದ ಟರ್ಕಿಯಲ್ಲಿ ಮತ್ತೊಂದು ಪ್ರಬಲ ಭೂಕಂಪ ಉಂಟಾಗಿದೆ. ಇಂದು ಬೆಳಗ್ಗಿನ ಜಾವ ಉಂಟಾಗಿರುವ ಭೂಕಂಪದಿಂದಾಗಿ ಹಲವು ಕಟ್ಟಡಗಳು ಧರೆಗುರುಳಿವೆ.

Temples Vandalized In Bangladesh: ಬಾಂಗ್ಲಾದೇಶದಲ್ಲಿಒಂದೇ ರಾತ್ರಿ 14 ಹಿಂದೂ ದೇಗುಲಗಳ ಮೇಲೆ ದಾಳಿ; ವಿಗ್ರಹಗಳು ಧ್ವಂಸ

0
0
14 Hindu Temples Vandalized In Bangladesh: ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮುಂದುವರಿದಿದೆ. ಶನಿವಾರ ಒಂದೇ ರಾತ್ರಿ 14 ದೇವಸ್ಥಾನಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ವಾಯುವ್ಯ ಬಾಂಗ್ಲಾದೇಶದ ಠಾಕೂರ್‌ಗಾಂವ್‌ನ ಬಲಿಯಾಡಂಗಿ ಸೇರಿ ಮೂರು ಗ್ರಾಮ ಪಂಚಾಯಿತಿಗಳಲ್ಲಿ ದಾಳಿ ನಡೆದಿದೆ. ಇದು ಸಂಘಟಿತ ದಾಳಿಯಾಗಿದ್ದು, ಬಾಂಗ್ಲಾದೇಶದ ಹಿಂದೂ ಸಮುದಾಯ ತೀವ್ರವಾಗಿ ಘಟನೆಯನ್ನು ಖಂಡಿಸಿದೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಆಗ್ರಹಿಸಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Spy Balloon: ಗೂಢಚಾರಿ ಬಲೂನು ನಾಶಕ್ಕೆ ಅಮೆರಿಕ ವಿರುದ್ಧ ಚೀನಾ ಗರಂ! ತಕ್ಕ ತಿರುಗೇಟು ನೀಡ್ತೀವಿ ಎಂದ ಡ್ರ್ಯಾಗನ್‌ ರಾಷ್ಟ್ರ

0
0
China Vs US On Spy Balloon: ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧಕ್ಕೆ ಗೂಢಚಾರಿ ಬಲೂನಿನ ವಿವಾದ ತಿರುವು ಕೊಟ್ಟಿದೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಕತ್ತಿ ಮಸೆಯುತ್ತಿವೆ. ತನ್ನ ಗೂಢಚಾರಿ ಬಲೂನ್‌ ಅನ್ನು ಹೊಡೆದುರುಳಿಸಿದ್ದಕ್ಕೆ ಚೀನಾ ಅಮೆರಿಕ ಮೇಲೆ ಗರಂ ಆಗಿದ್ದು, ಅಮೆರಿಕದ ಈ ನಡೆ ಎರಡು ರಾಷ್ಟ್ರಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾನಿಗೊಳಗಾಗಿದೆ ಎಂದಿದೆ.

Turkey-Syria Earthquake | ಮತ್ತೆ ನಡುಗಿದ ಟರ್ಕಿ, ಸಿರಿಯಾ: ಭೂಗರ್ಭದೊಳಗಿನ ಮೊರೆತದ ಪರಿಣಾಮ 1,900ಕ್ಕೂ ಹೆಚ್ಚು ಮಂದಿ ಸಾವು

0
0
Second Powerful Earthquake Hits Turkey and Syria: ಸೋಮವಾರ ಸಂಭವಿಸಿರುವ ಪ್ರಬಲ ಭೂಕಂಪಗಳಿಂದಾಗಿ ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಕುಸಿದಿವೆ. ಜನರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಬೆಳಿಗ್ಗೆ 7.8ರಷ್ಟು ತೀವ್ರತೆ ಹಾಗೂ ಮಧ್ಯಾಹ್ನ ಭೂಕಂಪದ ತೀವ್ರತೆ 7.6ರಷ್ಟು ದಾಖಲಾಗಿದೆ.

Mega EarthQuakes- ಮಹಾ ಭೂಕಂಪನ ಎಂದರೆ ಎಷ್ಟು ತೀವ್ರ? ಈ ಹಿಂದೆ ಭೂಮಿ ಮೈ ಕೊಡವಿದಾಗ ನಡುಗಿತ್ತು ಚಿಲಿ, ಪಾಕಿಸ್ತಾನ, ನೇಪಾಳ

0
0
ಟರ್ಕಿ ಮತ್ತು ಸಿರಿಯಾಗಳಲ್ಲಿ ನಡೆದ ಭೂಕಂಪನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 7.8 ಮ್ಯೂಗ್ನಿಟ್ಯೂಡ್ ಎಂದು ದಾಖಲಾಗಿದೆ. ಇದಕ್ಕಿಂತಲೂ ದೊಡ್ಡ ಭೂಕಂಪಗಳು ನಡೆದಿದ್ದು ಚಿಲಿಯಲ್ಲಿ 1960ರಲ್ಲಿ ನಡೆದ ಭೂಕಂಪ ರಿಕ್ಟರ್ ಮಾಪಕದಲ್ಲಿ 9.5 ಎಂದು ದಾಖಲಾಗಿತ್ತು. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಎಷ್ಟೋ ಮಂದಿ ನಾಪತ್ತೆಯಾಗಿದ್ದರು. ಆಗ ಉಂಟಾದ ಸಾವುನೋವುಗಳ ಲೆಕ್ಕ ಈವರೆಗೂ ಸರಿಯಾಗಿ ಸಿಕ್ಕಿಲ್ಲ. ಆ ಬಳಿಕ ಪಾಕಿಸ್ತಾನ ಮತ್ತು ನೇಪಾಳಗಳಲ್ಲಿ ನಡೆದ ದುರಂತಗಳೂ ಸಣ್ಣವೇನಲ್ಲ. ಎಷ್ಟೇ ದೊಡ್ಡ ಭೂಕಂಪವಾದರೂ 10 ಮ್ಯಾಗ್ನಿಟ್ಯೂಡ್ ಗಿಂತ ಹೆಚ್ಚಿರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ವಿಜ್ಞಾನಿಗಳು.




Latest Images